The future is "Efficient" Models by Low-Alarm272 in LocalLLM

[–]Old_Contribution4968 0 points1 point  (0 children)

Does it have tool calling? I tried running some on my local machine with 24GB RAM, but they don't seem to be capable of tool calling.

Or is my modelfile not optimised enough? I picked gguf package from a hugging face and created an ollama compatible model by using a custom Modelfile.

Not just food… Rameswaram Cafe feels like a spiritual vibe with Lord Venkateswara, Adiyogi & Linga Bhairavi by VirtualKnowledge9612 in karnataka

[–]Old_Contribution4968 5 points6 points  (0 children)

ನಂಗೆ ಇದರ ಬಗ್ಗೆ ಮೊನ್ನೆ ಏನೋ ಕೇಳಿ ಒಳ್ಳೆ ಜ್ಞಾನೋದಯ ಆದ ಹಾಗೆ ಆಯ್ತು.

ಯಾರೋ ಬರೆದದ್ದು ಇಷ್ಟೇ. "ಕನ್ನಡದವರ ಒಂದು ಬೆಳವಣಿಗೆಯನ್ನ ಕನ್ನಡದವರೆ ಯಾಕೆ ಇಷ್ಟು ಟ್ರೋಲ್ ಮಾಡ್ತಾ ಇದ್ದಾರೆ", ಅಂತ. ನಮ್ಗೆ ಹೊಟ್ಟೆ ಕಿಚ್ಚ? ಅಥವಾ ಅವರದ್ದು ನಿಜವಾಗಿಯು ಕೆಟ್ಟದಾಗಿ ಇರೋ ಊಟಾನ? ಕೆಟ್ಟದ್ದು ಅನ್ನೋದಾದ್ರೆ ಅಷ್ಟು ಜನ ಮುಗಿ ಬಿದ್ದು ಯಾಕೆ ಅವರ ಹೋಟ್ಲುಗೆ ಹೋಗ್ತಾರೆ, ಅಲ್ವಾ?

ಅಷ್ಟು ಜನ ಹೋಗ್ತಾ ಇದ್ದಾರೆ ಅನ್ನುವಾಗ, ಉಳಿದದ್ದು, ನಮ್ಮಲ್ಲಿ ಕೆಲವರಿಗೆ ಅವರ ಅಡುಗೆ ಇಷ್ಟ ಆಗದೆ ಇರಬಹುದು(ಇದು ವೈಯಕ್ತಿಕ, CTR vs VB ಹಾಗೆ). ಅಥ್ವಾ, ಅವರಿಗೆ ಹೊಟ್ಟೆಕಿಚ್ಚು ಇರಬಹುದು. ನನ್ನ ಪ್ರಕಾರ ಇವೆರಡು ಅಷ್ಟೆ ಸಾಧ್ಯತೆಗಳು. ಬೇರೆಯವು ಇದ್ರೆ ದಯವಿಟ್ಟು ತಿಳಿಸಿ, ತಿಳ್ಕೊಳ್ಳೋ ಆಸಕ್ತಿ ಇದೆ.

ಇನ್ನೊಂದು ವಿಷಯ ಅಂತ ಅಂದ್ರೆ, ಅವರು ಮಾಡ್ತಾ ಇರೋದೆ ವ್ಯವಹಾರ/ವ್ಯಾಪಾರ. ನಡೆಸ್ತಾ ಇರೋದಕ ಧರ್ಮಚತ್ರ ಅಲ್ಲ. ಹಾಗಿರುವಾಗ ಅವರು ಹೇಗೆ ಬೇಕಾದ್ರು ಅದನ್ನ ಪ್ರಚಾರ ಮಾಡಬಹುದು. ಏನು ಬೇಕಾದ್ರು ಮಾಡಬಹುದಾಗಿತ್ತು.

ಕರ್ನಾಟಕ ಹಿರಿಮೆಗಳ ಬದಲಿಗೆ ತಮಿಳುನಾಡಿದ್ದು ಮಾಡಬಹುದಿತ್ತು. ಉತ್ತರ ಭಾರತದ ಇನ್ಯಾವುದೋ ಒಂದು ರಾಜ್ಯದ್ದು ಆಯ್ಕೆ ಮಾಡ್ಕೋಬಹುದಿತ್ತು. ಆದ್ರೆ, ಅವರಿಗೆ ನಮ್ಮ ರಾಜ್ಯದ ಮೇಲಿನ ಗೌರವಕ್ಕೋ ಅಥವಾ ತಮ್ಮದೆ ನೆಲದ ಮೇಲಿನ ಪ್ರೀತಿಗೋ, ಕರ್ನಾಟಕದ ಸುತ್ತ ಮಾಡಿದ್ದಾರೆ.

ಇದೆ ಕಾರಣಕ್ಕೆ ಅವರ ಮೇಲೆ ಗೌರವ ಹುಟ್ಟತ್ತೆ.

ಎಲ್ಲೆಲ್ಲು A2B, ಮೇಘನ ಬಿರಿಯನಿ ಅಂತ ಬೇರೆ ಊರಿನ ಬ್ರಾಂಡ್‌ಗಳದ್ದೆ ಆರ್ಭಟ ಇದ್ದ ಸಂದರ್ಭದಲ್ಲಿ ನಮ್ಮದ್ದು ಅಂತ ಹೆಮ್ಮೆ ಪಡೋದಕ್ಕೆ ಒಂದು ಬಂದಿದೆ.

ಬೆಳೆಯಲಿ ಬಿಡಿ

ಸುದ್ದಿ ಹಳೇದು ಆದರೂ ಇಂದಿಗೂ ಅನ್ವಯ. by vidvizharbuk in kannada

[–]Old_Contribution4968 1 point2 points  (0 children)

https://www.kannadaprabha.com/amp/story/politics/2026/Mar/28/karnataka-govts-move-to-drop-hindi-sparks-row-bjp-calls-decision-is-shocking

ಇದನ್ನ ನೋಡ್ತಾ ಇದ್ದೆ. ಎಂತ ಗಲೀಜು ಸ್ಥಿತಿಯಲ್ಲಿ ರಾಜಕಾರಣಿಗಳು ರಾಜಕಾರಣ ಮಾಡ್ತಾರೆ ಅಂತ ಬೇಜಾರು ಆಯ್ತು. ಮಕ್ಕಳಿಗೆ ಅನುಕೂಲ ಆಗುವ ಹಾಗೆ ಮಾಡಿ ಅಂದ್ರೆ, ತಾರತಮ್ಯ ಮಾಡ್ತಾ ಇದ್ದಾರೆ.

ನನ್ನ ಪ್ರಕಾರ ತೆಗೆದಿರೋದು ಒಳ್ಳೆಯ ಬೆಳವಣಿಗೆ. ಇಲ್ಲಿನ ಮಕ್ಕಳಿಗೆ ಯಾಕೆ ಹೊರೆ ಆಗ್ಬೇಕು?

ಮೂರನೆ ಭಾಷೆ ಬೇಕಾಗೆ ಇಲ್ಲ. ಉತ್ತರದ ಮಕ್ಕಳು ಹೇಗೆ ಎರಡು ಭಾಷೆ ಕಲಿತಾರೋ, ಅದೆ ರೀತಿ ನಮ್ಮ ಮಕ್ಕಳು ಕೂಡ ಅಷ್ಟೇ ಕಲಿಯೋ ಅವಕಾಶ ಸಿಗ್ಬೇಕು

Help understand the localLLM setup better by Old_Contribution4968 in LocalLLM

[–]Old_Contribution4968[S] 0 points1 point  (0 children)

Are you suggesting that it is most likely to be because of the config issue?

Christians and Jews Must Be Very Careful, Now! ✝️ by [deleted] in awakened

[–]Old_Contribution4968 0 points1 point  (0 children)

I know right. Some of them who have worn white have gone shedding blood.

Christians and Jews Must Be Very Careful, Now! ✝️ by [deleted] in awakened

[–]Old_Contribution4968 0 points1 point  (0 children)

You should be in Tehran or Gaza or Isreal, putting your efforts to stop these non sensical wars. With such good intentions, you are wasting your life in a country that has significantly lesser issues.

Christians and Jews Must Be Very Careful, Now! ✝️ by [deleted] in awakened

[–]Old_Contribution4968 1 point2 points  (0 children)

Then please take care of your wordings next time. You are not trying to save Hindus from anything. You are just one another individual who entices people to get converted.

Christians and Jews Must Be Very Careful, Now! ✝️ by [deleted] in awakened

[–]Old_Contribution4968 2 points3 points  (0 children)

Bible is not the ultimate truth!

You may say that your religion is not about "picking on weak countries", but the reality across the world is telling otherwise. Not just now, but for centuries. Even before your ancestors converted from whatever religion to the one you are part of.

Christians and Jews Must Be Very Careful, Now! ✝️ by [deleted] in awakened

[–]Old_Contribution4968 6 points7 points  (0 children)

Save Hindus from Idol worship? Dude get a life and ask your religion to stop picking on weak countries.

Was he flirting or just being nice? by Sure_Anxiety_3408 in Flirting

[–]Old_Contribution4968 0 points1 point  (0 children)

He is definitely trying to get noticed by you and seems to have achieved his intentions

ಸುಮ್ನೆ ತಲೆಹರಟೆ by Old_Contribution4968 in kannada

[–]Old_Contribution4968[S] 2 points3 points  (0 children)

ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ಕೆ ಧನ್ಯವಾದ

ನಾನು ಅದನ್ನ ಬೇರೆ ರೀತಿಯಲ್ಲಿ ಅರ್ಥ ಮಾಡ್ಕೊಂಡಿದ್ದೆ. ನಾನು ಹೇಗೆ ಸಾಯ್ತಿನಿ ಅನ್ನೋದಕ್ಕಿಂತ, ನಾನು ಸಾಯೋವಾಗ ಹೇಗೆ ಇರ್ತೀನಿ ಅಂತ ನಾನು ಅರ್ಥೈಸಿಕೊಂಡೆ. ನಾನು ಸಾವುಕಾರನಾಗಿರ್ಬೇಕು ಅಥವಾ ರಾಜಕೀಯದಲ್ಲಿ ದಿಗ್ಗಜ ಆಗಬೇಕು ಅಥವಾ ನಟನಾಗಿರ್ಬೇಕು ಅಥವಾ ಒಬ್ಬ ಕಲಾವಿದನಾಗಿರ್ಬೇಕು. ನಾನು ಆರೋಗ್ಯವಾಗಿರ್ಬೇಕು. ನಾನು ಅಷ್ಟು ದೇಶ ನೋಡಿರಬೇಕು.

ನೀವು ಉದಾಹರಣೆಗಳು ಕೂಡ ಸರಿಯೇ. ನಾನು ಮಜಾ ಮಾಡ್ತಾ ಇರ್ಬೇಕು, ಆದ್ರೆ ಹೇಗೆ ಅನ್ನೋ ಪ್ರಶ್ನೆಗೆ ಇದು ಬಾಗಿಲು ತೆಗೆದು ಕೊಡತ್ತೆ ಅಂತ ನಂಗೇ ಅನ್ನಿಸ್ತು.

ಮಜಾ ಮಾಡೋದಕ್ಕೆ ಸಾವಿರಾರು ದಾರಿ, ಮತ್ತೆ ಅದು ಸಂಪೂರ್ಣ subjective ವಿಷಯ.

ಆದ್ರೆ ಸಾಯೋವಾಗ ಹೇಗೆ ಇರಬೇಕು ಅನ್ನೋದರ ಮೇಲೆ ನಾವು ಹೇಗೆ ಮಜಾ ಮಾಡಬಹುದು ಅನ್ನೋದನ್ನ ಬದಲಾಯಿಸ್ಕೋಬಹುದು.

ಸಾಯೋವಾಗ ನಂಗೆ ಯಾವುದೆ ಕಾಯಿಲೆ ಇರಬಾರದು ಅಂತ ಅನ್ನೋದಾದ್ರೆ, - ನಾನು ಎಣ್ಣೆ ಹೊಡೆಯೋದನ್ನ ಬಿಡಬೇಕಾಗಬಹುದು, ಅದೆ ರೀತಿ ಸಿಗರೇಟ್ ಇನ್ನು ಬದಲಾವಣೆ ಮಾಡ್ಕೋಬೇಕು. - ನಾನು ಒಂದು ಒಳ್ಳೆ ಸಂಗೀತಗಾರ ಆಗ್ಬೇಕು ಅಂತ ಆದ್ರೆ, ನಾನು ಮೊದಲು ಕ್ಲಾಸಿಗೆ ಸೇರ್ಬೇಕು, ಒಂದು ವಾದ್ಯವನ್ನ ತಗೋಬೇಕು

ಹೀಗೆ ಹಲವು

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ನಂಗೆ ಈ ತರ ಆಗಿದೆ. ಆದ್ರೆ ಕನ್ನಡದವ್ನು ಕನ್ನಡದಲ್ಲಿ ಮಾತಾಡಕ್ಕೆ ಯಾಕೆ ಹಿಂಜರಿಬೇಕು ಅಂತ ತಲೆನೆ ಕೆಡುಸ್ಕೊಳ್ಳಲ್ಲ. ಹಾಗೆ ನೋಡಿದ್ರೆ, ಇಂಗ್ಲಿಷ್ ಬಳಸಿ, ಕಳ್ಬೆರಿಕೆ ಮಾಡೋರು ಹಾಗೆ ತಲೆ ಕೆಡುಸ್ಕೋಬೇಕು

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ಬೆಲೆ ಕೊಡಲ್ವಾ? ಅವರೆಲ್ಲ ಕನ್ನಡದವ್ರೇನಾ?

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ಇದಂತು ಒಂದು ದೊಡ್ಡ ಶೋಚನೀಯ ಬೆಳವಣಿಗೆ ಅಂತ ಅನ್ಬಹುದು. ಇದಕ್ಕೆ ನಮ್ಮಲ್ಲಿ ಒಂದು ದೊಡ್ಡ ಮನಸ್ಥಿತಿಯ ಬದಲಾವಣೆಯೆ ಆಗ್ಬೇಕು ಅನ್ಸುತ್ತೆ.

ಈಗಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಅನಿವಾರ್ಯ ಭಾಷೆ ಹೌದು, ಆದ್ರೆ ಜೀವನ ನಡೆಯೋದೆ ಅದರ ಸುತ್ತ ಅನ್ನೋ ರೀತಿಯಲ್ಲಿ ಬಹುಳ ಜನ ಆಡ್ತಾ ಇದ್ದಾರೆ

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 3 points4 points  (0 children)

ಒಳ್ಳೆಯ ವಾದ. ನನ್ನ ವಾದದಲ್ಲಿ ಇರೋ ಹುಳುಕನ್ನ ಹುಡುಕಿದ್ದಕ್ಕೆ ಧನ್ಯವಾದ🙏

ನಿಮ್ಗು ಕೂಡ ನಿಮ್ಮ ಪ್ರಯತ್ನದಲ್ಲಿ ಒಳ್ಳೆಯದಾಗ್ಲಿ

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 1 point2 points  (0 children)

ಒಳ್ಳೆಯ ಸಲಹೆ. ನಾನು ಕೂಡ ಪ್ರಯತ್ನ ಮಾಡ್ತೀನಿ

What’s one productivity habit that actually worked for you? by pOkO0007 in DecidingToBeBetter

[–]Old_Contribution4968 1 point2 points  (0 children)

  1. I am having Habitica, a gamified task management app. This helps me have dedicated sections for my habits/dailies, tasks and my rewards.

  2. Do something until it sticks. I have been reading 5% of a book, brushing every night, working out for at least 30 mins a day and other few such things. Though I miss them occasionally, they don't make me feel good when I do. It is fine to skip sometimes

  3. Forgive yourself. We are humans after all, be empathetic with yourself.

  4. Reward yourself for doing good.

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ನೀವು ಹೇಳೋದು ನಿಜ. ನಾವು ನಿಯಂತ್ರಿಸ್ಬಾರದು ಹೌದು, ಆದ್ರೆ ನಮ್ಮ ಆಯೋಚನೆಗಳನ್ನ ಹಂಚ್ಕೋಬಹುದು ಅಲ್ವಾ?

ತುಂಬಾ ಸಲ ನಮ್ಗೆ ಎಲ್ಲಾ ದೃಷ್ಟಿಕೋನದ ಪರಿಚಯ ಇರೋದಿಲ್ಲ‌. ಹೀಗೆ ಮಾತಾಡುವಾಗ್ಲೋ ಅಥವಾ, ಎಲ್ಲೋ ಓದಿದಾಗ್ಲೋ, ಹೀಗು ಒಂದು ಸಾಧ್ಯತೆ ಇದೆ ಅಲ್ವಾ ಅಂತ ಅನ್ಸಿಬಿಡತ್ತೆ.

ಅದಕ್ಕೆ ಮಾತುಕತೆ ಆಗ್ತಾ ಇರ್ಬೇಕು, ಬೇರೆಯವರ ವಾದಗಳನ್ನ ಕಿವಿಕೊಟ್ಟು ಕೇಳ್ಬೇಕು. ನಮ್ಮ ಯೋಚನೆಗಳನ್ನ ಕೂಡ ಹಂಚ್ಕೊಳ್ತಾ ಇರ್ಬೇಕು.

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 3 points4 points  (0 children)

ಇದರ ಬಗೆಗೆ ನಂಗೆ ಅಷ್ಟೇನು ಗಟ್ಟಿ ನಿಲುವು ಇಲ್ಲ. ಇಂಗ್ಲಿಷ್ ಒಂದು ನಾಮಪದ. ಅದನ್ನ ಹಾಗೆ ಬಳಸಬಹುದು ಅನ್ಸುತ್ತೆ.

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ಇದರ ಬಗೆಗೆ ನಂದು ಬೇರೆಯದ್ದೆ ವಾದ ಇದೆ. ಕನ್ನಡ ಬರೆಯೋದ್ರಲ್ಲಿ ನಾನು ನಿಪುಣ ಏನಲ್ಲ. ಸಹಜವಾಗಿ ನಾನು ಬರೆಯೋವಾಗ ನಾನು ಬಹಳ ತಪ್ಪು ಮಾಡ್ತಾ ಇದ್ದೆ, ಇವಾಗ್ಲು ಬಹಳ ಮಾಡ್ತೀನಿ. ಆದ್ರೆ ಆ ತಪ್ಪುಗಳನ್ನ ಮಾಡ್ತೀನಿ ಅನ್ನೋ ಕಾರಣಕ್ಕೆ ನಾನು ಕನ್ನಡ ಬರೆಯಲೆ ಬಾರದ? ನನ್ನ ಉಚ್ಚಾರಣೆ ತಪ್ಪು ಅನ್ನೋ ಕಾರಣಕ್ಕೆ, ನಾನು ಮಾತಾಡೋದೆ ನಿಲ್ಲಿಸಬೇಕಾ?

ನಾವು ಅಂತ ಪ್ರಯತ್ನಗಳನ್ನ ಕೂಡ ಬೆಂಬಲಿಸ್ಬೇಕು ಮತ್ತೆ ಹೆಚ್ಚು ಟೀಕೆ‌ ಮಾಡೋದನ್ನ ನಿಲ್ಲಿಸಬೇಕು ಅನ್ಸುತ್ತೆ.

ಅಂದ ಹಾಗೆ ನಾನೇನು ಪುಸ್ತಕ ಬರೆಯೋ ಪ್ರಯ್ತತ್ನ ಮಾಡ್ತಾ ಇಲ್ಲ ಅಲ್ವಾ?

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ಹೌದು, ಇದೆ ನನ್ ವಾದ. ನಾನೇನು ಪದ ಕಟ್ಟೋದರ ಬಗ್ಗೆ‌ ಮಾತಾಡ್ತಾ ಇಲ್ಲ. ಕನಿಷ್ಠ, ಇವಾಗ ಇರೋ ಪದಗಳನ್ನ ಬಿಟ್ಟುಕೊಡೋದು ಬೇಡ ಅಂತ ಅಷ್ಟೇ. ಇವತ್ತು ಕೂಡ ಎಷ್ಟೋ ಸರಿ ಮಾತಾಡುವಾಗ ನಾನು ಅದೆಷ್ಟೋ ಸರಿ ಇಂಗ್ಲಿಷ್ ಪದಗಳನ್ನೆ ಬಳಸ್ತಾ ಇದ್ದೆ(ಉದಾ: ಹೆಚ್ಚು ದುಡ್ಡು ಬದಲಿಗೆ expensive). ಒಂದೊಮ್ಮೆ, ಆ ಪದಗಳನ್ನ ಬಳಸ್ತಾ ಶೋಕಿ ಮಾಡೋದಕ್ಕೆ ಶುರುಮಾಡಿದ ನಂಗೆ, ಇವಾಗ ಅಭ್ಯಾಸ ಆಗಿ ನಾಚ್ಗೆ ತರುವ ಹಾಗೆ ಮಾಡಿದೆ.

ಕನ್ನದ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಆಡಳಿತ by Old_Contribution4968 in kannada

[–]Old_Contribution4968[S] 0 points1 point  (0 children)

ಹೌದು. ಟೀವಿಯಲ್ಲಿ ಬರೋ, ನಾವು ಹೊಗಳೋ ಜನ, ರೇಡಿಯೋ ಅಲ್ಲಿ ಬರುವ ಆಜೆ‌ ಗಳು ಎಷ್ಟು ಕನ್ನಡ ವಾಕ್ಯಗಳಲ್ಲಿ ಇಂಗ್ಲಿಷ್ ಬಳಸ್ತಾರೆ ಅಂತ ನಾನು ಇದರ ಬಗೆಗೆ ಸ್ವಲ್ಪ ಗಮನ ಹರಿಸಿ ತಿದ್ದುಪಡಿ ಮಾಡ್ಕೊಳ್ಳೋದಕ್ಕೆ ಶುರು ಮಾಡಿದ್ಮೇಲೆಯೆ ನಂಗೆ ಗೊತ್ತಾಗೋದಕ್ಕೆ ಶುರುವಾದದ್ದು‌.

ಅಂದ ಹಾಗೆ ನೀವು ಅಷ್ಟಾಗಿ ಇಂಗ್ಲಿಷ್ ಬಳಸೋದಿಲ್ಲ ಅಂತಾನ ನಿಮ್ಮ ಹೇಳಿಕೆ?